New Katha Varnika is now on Google Play — read original stories on your phone. Learn more
ನನ್ನವಳು – 6
ನನ್ನವಳು Premium 6 min read

ನನ್ನವಳು – 6

ನನ್ನವಳು – ೬

ನಿಧಾನವಾಗಿ ಮೈ ಮುರಿಯುತ್ತಾ ಎದ್ದ ಅದಿತಿ, ಕಣ್ಣು ಬಿಟ್ಟು ಸುತ್ತಲೂ ನೋಡಿದಳು. ಮನೋಜ್ ಎದುರಿಗೆ ನಿಂತಿದ್ದ.

” ಅಣ್ಣ, ಗುಡ ಮಾರ್ನಿಂಗ್… ಇಷ್ಟು ಬೇಗ ಎದ್ದು ಬಿಟ್ಯಾ.. ” ಎಂದು ಕೇಳುತ್ತಾ ಎದ್ದು ಕುಳಿತಳು.

 

” ಬೇಗ ಏನು ಅಲ್ಲ ನನ್ ತಂಗಿ..ಆಗಲೇ ಗಂಟೆ ಎಂಟಾಗಿದೆ..” ಎಂದು ಮುದ್ದು ಮುದ್ದಾಗಿ ಹೇಳುತ್ತಾ ಅವಳ ಬಳಿ ಬಂದ ಮನೋಜ್.

 

” ಅಯ್ಯೋ ಎಂಟು ಗಂಟೆ ಆಗೋಯ್ತ ?? ಎದ್ದು ರೆಡಿ ಆಗ್ಬೇಕು ಆಫೀಸ್ ಗೆ ಲೇಟ್ ಆಗ್ತಿದೆ… ” ಎನ್ನುತ್ತಾ ಗಡಿಬಿಡಿ ಮಾಡಿದಳು.

 

” ಇರ್ಲಿ ಪರವಾಗಿಲ್ಲ ಅದಿತಿ… ಆಫೀಸ್ ಗೆ ಲೇಟ್ ಆಗಿ ಬಾ ಅಷ್ಟೇ.. ನಾನು ಮ್ಯಾನೇಜರ್ ಗೆ ಹೇಳ್ತೀನಿ.. ಸಂಜೆ ಲೇಟ್ ಮನೆಗೆ ಬಂದ್ರೆ ಆಯ್ತು.. ನಾನು ನಿನ್ ಜೊತೆ ಕೆಲಸ ಮಾಡ್ತೀನಿ…” ಎಂದ ಮನೋಜ್.

 

” ಅತ್ತಿಗೆ ಜೊತೆ ಹರಟೆ ಹೊಡೆಯೋಕೆ ಇದೊಂದು ನೆಪ ನಿಂಗೆ… ” ಎನ್ನುತ್ತಾ ಅದಿತಿ ಎದ್ದು ಬೆಡ್ಶೀಟ್ , ದಿಂಬುಗಳನ್ನೆಲ್ಲ ಎತ್ತಿಕೊಳ್ಳಲು ಶುರು ಮಾಡಿದಳು. ಮನೋಜ್ ಗೆ ಅದಿತಿ ಹೇಳಿದ್ದು ಹೌದೆಂದು ರಾಧಿಕಾಳ ನೆನಪಾಗಿ ನಗು ಬಂದಿತ್ತು.

 

Premium Premium reading Full story · from ₹69
Sign in to continue