ನನ್ನವಳು – ೭
ಟ್ರಿಣ್ ! ಟ್ರಿಣ್ ! ಎಂದು ಮೊಬೈಲ್ ಸದ್ದಾದಾಗ ಅದಿತಿ ಯೋಚನಾ ಲಹರಿಯಿಂದ ಹೊರಬಂದಿದ್ದಳು.
ಮೊಬೈಲ್ ನೋಡಿದರೆ ಅಭಿನವ್ ಕರೆ. ಕರೆ ಸ್ವೀಕರಿಸಿದಳು.
” ಹಾಯ್ ಅದಿತಿ.. ಏನ್ ಮಾಡ್ತಿದ್ದೆ.. ಬ್ಯುಸಿ ಇಲ್ಲ ತಾನೆ ? ಮಾತಾಡಬಹುದಾ..? ” ಕೇಳಿದ್ದ ಅಭಿನವ್.
ಅದಿತಿಗೆ ಅವನ ಕರೆ ಸಂತೋಷ ತಂದಿತ್ತು.
” ಬ್ಯುಸಿ ಏನಿಲ್ಲ.. ಅಭಿನವ್..ಈಗಷ್ಟೇ ಆಫೀಸಿಂದ ಬಂದು ಫ್ರೆಶ್ ಆಗಿ, ಹಾಗೆ ಹಾಸಿಗೆ ಮೇಲೆ ಬಿದ್ಕೊಂಡಿದ್ದೆ..ಅಷ್ಟೇ..” ಎಂದು ನಗುತ್ತಲೇ ಹೇಳಿದಳು.
ಹಾಗೆಯೇ ಅವತ್ತಿನ ದಿನಚರಿಯ ಬಗ್ಗೆ ಒಂದಿಷ್ಟು ಮಾತನಾಡಿದರು. ವೀಕೆಂಡ್ ಅಲ್ಲಿ ತಾನು ಶಾಪಿಂಗ್ ಹೋಗಬೇಕೆಂಬ ವಿಷಯವನ್ನೂ ಹೇಳಿದಳು.