New Katha Varnika is now on Google Play — read original stories on your phone. Learn more

ಒಲವಿನ ಸೆರೆ

13 stories Ongoing Romance Family Drama Suspense

ವಿಶೇಷ ಸೂಚನೆ : ಈ ಕಥೆಯು ಸಂಪೂರ್ಣ ನನ್ನ ಕಲ್ಪನೆಯಲ್ಲಿ ಮೂಡಿಬಂದಿದ್ದು, ಯಾವುದೇ ಕಥೆ ಕಾದಂಬರಿ ಅಥವಾ ನಿಜ ಜೀವನಕ್ಕೆ ಹೋಲಿಕೆ ಕಂಡುಬಂದಲ್ಲಿ ಕೇವಲ ಕಾಕತಾಳೀಯ. ✨✨✨✨✨✨ ಮುಂಬೈ ನಗರದ ಪ್ರಸಿದ್ಧ ಕನ್ವೆನ್ಷನ್ ಹಾಲ್ ಇಂದು ಬಣ್ಣ ಬಣ್ಣದ ಬೆಳಕಿನಿಂದ ಕಂಗೊಳಿಸುತ್ತಿತ್ತು. ಮಾಧ್ಯಮ ಸಂಸ್ಥೆಗಳು ಎಲ್ಲರನ್ನೂ ಸ್ವಾಗತ ಕೋರುವವರಂತೆ ಎಲ್ಲೆಡೆ ಆವರಿಸಿದ್ದರು. ವೇದಿಕೆಯು ವಿಶೇಷವಾದ ಸಮಾರಂಭಕ್ಕೆಂದು ಸಿದ್ಧವಾಗಿತ್ತು. ವೇದಿಕೆಯ ದೊಡ್ಡದಾದ ಪರದೆಯ ಮೇಲೆ ಹಿಂದಿನ ವರ್ಷಗಳ ಪ್ರಶಸ್ತಿಗಳು ಹಾಗೂ ವಿಜೇತರ ಪಟ್ಟಿಯನ್ನು ಹಾಕಲಾಗಿತ್ತು. ಅದಲ್ಲದೇ ಈ ವರ್ಷದ ಪ್ರಶಸ್ತಿಗೆ ಅರ್ಹರಾದ ಕೆಲವರ ಹೆಸರುಗಳನ್ನು ಸಹ ಹಾಕಲಾಗಿತ್ತು. ಎಲ್ಲವನ್ನು ಪರದೆಯ ಮೇಲೆ ಒಂದರ ಹಿಂದೆ ಒಂದರಂತೆ ಪ್ರದರ್ಶಿಸಲಾಗುತ್ತಿತ್ತು. ವೇದಿಕೆಯ ಮುಂಭಾಗದಲ್ಲಿ ಚಂದದ ಅಲಂಕಾರದ ಮಧ್ಯೆ ಮುಖ್ಯ ಪ್ರಶಸ್ತಿಯ ಟ್ರೋಫಿಯನ್ನು ಇಡಲಾಗಿತ್ತು. ವೇದಿಕೆಯಲ್ಲಿ ರಾಜಕೀಯ ಗಣ್ಯರು, ಉದ್ಯಮಿಗಳು, ಮಾಧ್ಯಮದವರು ಅನೇಕ…

Browse Stories

ಒಲವಿನ ಸೆರೆ

ಒಲವಿನ ಸೆರೆ – 1

ವಿಶೇಷ ಸೂಚನೆ : ಈ ಕಥೆಯು ಸಂಪೂರ್ಣ ನನ್ನ ಕಲ್ಪನೆಯಲ್ಲಿ ಮೂಡಿಬಂದಿದ್ದು, ಯಾವುದೇ ಕಥೆ ಕಾದಂಬರಿ ಅಥವಾ ನಿಜ ಜೀವನಕ್ಕೆ ಹೋಲಿಕೆ ಕಂಡುಬಂದಲ್ಲಿ ಕೇವಲ ಕಾಕತಾಳೀಯ.    ✨✨✨✨✨✨    ಮುಂಬೈ ನಗರದ ಪ್ರಸಿದ್ಧ ಕನ್ವೆನ್ಷನ್ ಹಾಲ್ ಇಂದು ಬಣ್ಣ ಬಣ್ಣದ ಬೆಳಕಿನಿಂದ ಕಂಗೊಳಿಸುತ್ತಿತ್ತು. ಮಾಧ್ಯಮ ಸಂಸ್ಥೆಗಳು ಎಲ್ಲರನ್ನೂ ಸ್ವಾಗತ ಕೋರುವವರಂತೆ ಎಲ್ಲೆಡೆ ಆವರಿಸಿದ್ದರು. ವೇದಿಕೆಯು ವಿಶೇಷವಾದ ಸಮಾರಂಭಕ್ಕೆಂದು ಸಿದ್ಧವಾಗಿತ್ತು. ವೇದಿಕೆಯ ದೊಡ್ಡದಾದ ಪರದೆಯ ಮೇಲೆ ಹಿಂದಿನ ವರ್ಷಗಳ ಪ್ರಶಸ್ತಿಗಳು ಹಾಗೂ ವಿಜೇತರ ಪಟ್ಟಿಯನ್ನು ಹಾಕಲಾಗಿತ್ತು. ಅದಲ್ಲದೇ […]

6 min 22 views
ಒಲವಿನ ಸೆರೆ

ಒಲವಿನ ಸೆರೆ – 2

ಬೆಳಗಿನ ಮಂಜು ಎಲ್ಲೆಡೆ ಆವರಿಸಿತ್ತು. ನಗರವಿನ್ನೂ  ಸಂಪೂರ್ಣವಾಗಿ ಎಚ್ಚರವಾಗಿರಲಿಲ್ಲ. ರಸ್ತೆಗಳಲ್ಲಿ ವಾಹನಗಳ ಶಬ್ದ ಕಡಿಮೆಯಿತ್ತು. ಹಕ್ಕಿಗಳ ಚಿಲಿಪಿಲಿ ಕಲರವ ಸೊಂಪಾಗಿ ಕೇಳುತ್ತಿತ್ತು. ಮುಂಜಾನೆಯ ತಂಗಾಳಿ ಮನಸಿಗೆ ಹಿತವೆನಿಸುವಂತೆ ತಂಪಾಗಿ ಬೀಸುತ್ತಿತ್ತು.    ನಗರದ ಹೃದಯ ಭಾಗದಲ್ಲಿ ಇರುವ ದೊಡ್ಡದಾದ ಮಹಲಿನಂತಹ ಮನೆಯಲ್ಲಿ ಗಂಟೆಯ ನಾದ ಕೇಳಿಬರುತ್ತಿತ್ತು. ಸುಮತಿ ಅವರು ಮುಂಜಾನೆ ಬೇಗನೆ ಎದ್ದು ಸ್ನಾನ ಮಾಡಿ ದೇವರಿಗೆ ಪೂಜೆ ಮಾಡುತ್ತಿದ್ದರು. ಅವರ ಮುಖದಲ್ಲಿ ಸಾಕ್ಷಾತ್ ಮಹಾಲಕ್ಷ್ಮಿಯಂತ ಕಳೆಯಿತ್ತು. ಅವರು ಆರತಿ ತೆಗೆದುಕೊಂಡು ಬಂದವರು ಆಗಷ್ಟೇ ಸೋಫಾದಲ್ಲಿ ಬಂದು […]

6 min 15 views
ಒಲವಿನ ಸೆರೆ

ಒಲವಿನ ಸೆರೆ – 3

  ರಾಜಶೇಖರ್ ಅವರು ಪ್ರಸ್ತುತ ರಾಜಕೀಯದಲ್ಲಿ ಸಂಸದರಾಗಿ ಸೇವೆ ಸಲ್ಲಿಸುತ್ತಿದ್ದರು. ಇಷ್ಟು ವರ್ಷದ ಅವರ ರಾಜಕೀಯ ಜೀವನದಲ್ಲಿ ಒಂದು ಬಾರಿ ರಾಜ್ಯದ ಕ್ಯಾಬಿನೆಟ್ನಲ್ಲಿ ಮಂತ್ರಿ ಪದವಿ ಪಡೆದಿದ್ದರು. ಅವರ ಪಕ್ಷವು ರಾಜ್ಯದಲ್ಲಿ ಅನೇಕ ಬೆಂಬಲಿಗರನ್ನು ಹೊಂದಿತ್ತು. ತಮ್ಮದೇ ಸ್ವಂತ ಪಕ್ಷ ಕಟ್ಟಿ ಚುನಾವಣೆಗೆ ಸ್ಪರ್ಧಿಸಿದ್ದರು. ಅವರ ಪಕ್ಷದಿಂದ ರಾಜ್ಯದ ಮುಂದಿನ  ಮುಖ್ಯಮಂತ್ರಿ ಆಕಾಂಕ್ಷಿ ಆಗಿದ್ದರು. ಅವರಿಗೆ ಜೀವನದಲ್ಲಿ ರಾಜಕೀಯ ಎಂದರೆ ಅವರ ಜೀವನದ ಗುರುತು ಎಂದೇ ಹೇಳಬಹುದು.   ಅವರ ಪಿಎ ಕುಮಾರ್ ಅವರು,”ಸರ್…ನಿಮಗೆ ಏನನಿಸುತ್ತೇ? ಬರುವ […]

6 min 19 views
ಒಲವಿನ ಸೆರೆ

ಒಲವಿನ ಸೆರೆ – 4

  ಕುಮಾರ್ ಅವರು ರಾಜಶೇಖರ್ ಅವರಿಗೆ ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಕ್ಯಾಬಿನೆಟ್ ಮಿನಿಸ್ಟರ್ ಜಗದೀಶ್ ಅವರ ಜೊತೆ ವೈಯಕ್ತಿಕ ಸಂಬಂಧ ಬೆಳೆಸುವಂತೆ ಸಲಹೆ ನೀಡಿದ್ದರು. ಅವರು ಅರ್ಥವಾಗದೇ ಏನೆಂದು ಕೇಳಲು ಸ್ನೇಹ ಸಂಬಂಧ ಬೆಳೆಸುವಂತೆ ಹೇಳಿದ್ದರು. ರಾಜಶೇಖರ್ ಅವರು ಈ ವಯಸ್ಸಲ್ಲಿ ಸ್ನೇಹ ಸಂಬಂಧ ಎಲ್ಲಾ ಕಷ್ಟ ಕುಮಾರ್ ಸುಮ್ಮನೆ ಅನವಶ್ಯಕವಾಗಿ ಏನೇನೋ ಹೇಳಬೇಡಿ ಎಂದು ಅಸಹನೆಯಿಂದ ಹೇಳಲು ನಿಮಗೆ ಸಾಧ್ಯವಾಗದಿದ್ದರೆ ನಿಮ್ಮ ಮಗ ಇದಾನಲ್ಲ ಎಂದು ಹೇಳಿದ್ದರು.    ಕುಮಾರ್ ತಮ್ಮ ಮಾತು ಮುಂದುವರೆಸಿದವರು,”ಅಂದ್ರೆ ನಿಮ್ಮ […]

6 min 20 views
ಒಲವಿನ ಸೆರೆ

ಒಲವಿನ ಸೆರೆ – 5

  ರಾಜಶೇಖರ್ ಅವರು ರಾಜಕೀಯ ವಿಷಯದ ಬಗ್ಗೆ ಮಾತನಾಡಿದವರು,”ಕೆಲವು ಪಕ್ಷದವರು ನಮ್ಮ ವಿರುದ್ಧ ಪ್ರಚಾರ ಮಾಡ್ತಾ ಇದಾರೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿದೆ…ನೀವು ನಮ್ಮ ಪರವಾಗಿ ಏನಾದರೂ ಸಹಾಯ ಮಾಡಬಹುದಾ? ನಿಮ್ಮ ಬೆಂಬಲದ ಅಗತ್ಯ ನಮಗೆ ಈಗ ಬಹಳ ಇದೆ…” ಎಂದು ವಿನಂತಿ ಮಾಡುವ ಹಾಗೆ ಹೇಳಿದ್ದರು.    ಜಗದೀಶ್ ಅವರು,”ಖಂಡಿತ ನನ್ನ ಸಹಾಯ ನಿಮಗೆ ಇದ್ದೇ ಇರತ್ತೆ…ನಿಮ್ಮಂತ ನಾಯಕರ ಅವಶ್ಯಕತೆ ನಮ್ಮ ರಾಜ್ಯಕ್ಕೆ ಇದೆ…” ಎಂದು ಆಶ್ವಾಸನೆ ಕೊಟ್ಟಿದ್ದರು.    ಕುಮಾರ್ ಅವರು ವಿಷಯ ಹೇಳಿ […]

6 min 17 views
ಒಲವಿನ ಸೆರೆ Premium

ಒಲವಿನ ಸೆರೆ – 6

  ರಾಜಶೇಖರ್ ಅವರು ಇಷ್ಟು ಒಳ್ಳೆಯ ಸಂಬಂಧ ಬಂದಿದೆ ನಿನಗೆ ಒಳ್ಳೆಯದಾಗಲಿ ಅಂತಲೇ ಅಲ್ವಾ ಇದೆಲ್ಲ ಮಾಡ್ತಾ ಇರೋದು ಒಪ್ಪಿಕೊ ಮಗನೆ ಎಂದು ಭಾವನಾತ್ಮಕವಾಗಿ ಹೇಳುತ್ತಿದ್ದರೆ ವಿರಾಟ್ ಅವರ ಮಾತಿಗೆ ಎದುರು ಹೇಳದಾದ. ಹಾಗಂತ ತನ್ನ ಇಷ್ಟಕ್ಕೆ ವಿರುದ್ಧವಾಗಿ ಮದುವೆಯಾಗಲು ಅವನಿಂದ ಸಾಧ್ಯವಿಲ್ಲ. ತಂದೆಯ ಮಾತು ತನ್ನ ಕನಸು ಇವೆರಡರ ಮಧ್ಯೆ ಸಿಕ್ಕು ಒಡ್ಡಾಡುತ್ತಿದ್ದ. ಆದರೂ ಮನಸು ತಡೆಯದೆ,”ನಿಮ್ಮ ಮಾತನ್ನ ಒಪ್ತೀನಿ ಡ್ಯಾಡ್…ಆದರೆ ಪ್ಲೀಸ್ ಈ ವಿಷಯದಲ್ಲಿ ಫೋರ್ಸ್ ಮಾಡಬೇಡಿ ಪ್ಲೀಸ್…” ಎಂದು ಹೇಳಿದರೆ ರಾಜಶೇಖರ್ ಅವರು […]

6 min 22 views
ಒಲವಿನ ಸೆರೆ Premium

ಒಲವಿನ ಸೆರೆ – 7

  ಜಗದೀಶ್ ಅವರು ಮಗಳ ಬಳಿ ನಿನಗೆ ಮದುವೆ ಒಪ್ಪಿಗೆ ಇದೆಯಾ ಪುಟ್ಟಿ? ಎಂದು ಕೇಳಿದಾಗ ಅವಳು ತಲೆ ತಗ್ಗಿಸಿ ಹೌದು ಎನ್ನುವಂತೆ ತಲೆಯಾಡಿಸಿದಳು. ವಿರಾಟ್ ಕೂಡ ಒಪ್ಪಿಗೆ ಎನ್ನುವಂತೆ ಹೇಳಿದ್ದ. ಜಗದೀಶ್ ಅವರು ಪುರೋಹಿತರಿಗೆ ಕರೆ ಮಾಡಿದ್ದೇನೆ ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಬರುತ್ತಾರೆ ಎಂದಿದ್ದರು. ಕೆಲ ಹೊತ್ತಿನಲ್ಲಿ ಪುರೋಹಿತರು ಬಂದವರು ಇಬ್ಬರ ಜಾತಕಗಳನ್ನು ಹೊಂದಿಸಿ ನೋಡಿದ್ದರು. ಇಬ್ಬರ ಜಾತಕ ತುಂಬ ಚೆನ್ನಾಗಿ ಹೊಂದಾಣಿಕೆ ಆಗುತ್ತಿದೆ. ಹುಡುಗಿಯ ಜಾತಕ ಬಹಳ ಉತ್ತಮವಾಗಿದೆ ಅವಳು ಯಾವ ಮನೆ ಸೇರುತ್ತಾಳೋ […]

6 min 18 views
ಒಲವಿನ ಸೆರೆ Premium

ಒಲವಿನ ಸೆರೆ – 8

  ವಿರಾಟ್ ಅವಳ ಮೃದುವಾದ ಬೆರಳಿಗೆ ಉಂಗುರ ತೊಡಿಸುವಾಗ ಒಂದು ಕ್ಷಣ ಅವನ ಕಣ್ಣಿನಲ್ಲಿದ್ದ ಆತಂಕವನ್ನು ಅವಳು ಗಮನಿಸಿದ್ದಳು. ಅವಳು ಅವನ ಬೆರಳಿಗೆ ಉಂಗುರ ತೊಡಿಸುವಾಗ ಅವನು ಅವಳ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿದ್ದ. ಅವಳು ಅವನ ಆತಂಕವನ್ನು ಅರಿತಂತೆ ಚಂದದ ಸಣ್ಣ ನಗು ನೀಡಿದ್ದಳು. ಆ ನಗುವಿನಲ್ಲಿ ಅವನಿಗೆ ಆ ಕ್ಷಣ ಸಮಾಧಾನದ ಜೊತೆ ಮುಂದಿನ ಭರವಸೆ ಕಂಡಿತ್ತು. ಅವರಿಬ್ಬರ ಸುಂದರ ಕ್ಷಣಗಳು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿತ್ತು. ಉಂಗುರ ಬದಲಾಯಿಸಿಕೊಳ್ಳುವ ಮೂಲಕ ಇಬ್ಬರೂ ತಮ್ಮ ದಾಂಪತ್ಯ ಜೀವನಕ್ಕೆ […]

6 min 17 views
ಒಲವಿನ ಸೆರೆ Premium

ಒಲವಿನ ಸೆರೆ – 9

  ವಿರಾಟ್ ತನ್ನೊಳಗೆ ಇರುವ ನೋವನ್ನು ತೋರಿಸಿಕೊಳ್ಳದೆ ಹಾಕಿಕೊಂಡಿರುವ ಮುಖವಾಡ ನೋಡುಗರ ಕಣ್ಣಿಗೆ ಅಹಂಕಾರದಂತೆ ಕಾಣುತ್ತಿತ್ತು. ಅಜ್ಜಿಯ ಮಡಿಲಲ್ಲಿ ಮಲಗಿದ್ದ ವಿರಾಟ್ ಗೆ ಸೊಂಪಾದ ನಿದ್ದೆ ಬಂದಿತ್ತು. ಶಾಂತಮ್ಮ ಊಟಕ್ಕೆ ಕರೆಯಲು ಬಂದವರು ವಿರಾಟ್ ಮಲಗಿದ್ದನ್ನು ನೋಡಿ ಎಬ್ಬಿಸಲು ಮನಸಾಗದೇ ಗೌರಿ ಅವರನ್ನು ಪಿಸುದನಿಯಲ್ಲಿ ಕರೆದಿದ್ದರು. ಗೌರಿ ಅವರು ವಿರಾಟ್ ತಲೆ ಸವರಿದವರು ಊಟ ಮಾಡಿ ಮಲಗುವಂತೆ ಏಳು ಎಂದು ಎಬ್ಬಿಸಿದ್ದರು. ವಿರಾಟ್ ತಡಬಡಿಸಿ ಎದ್ದವನು ಅಯ್ಯೋ ಅಜ್ಜಿ ನಿದ್ದೆ ಬಂದಿದ್ದೇ ತಿಳಿಯಲಿಲ್ಲ ಬಾ ಊಟ ಮಾಡೋಣ […]

6 min 16 views
ಒಲವಿನ ಸೆರೆ Premium

ಒಲವಿನ ಸೆರೆ – 10

  ಅಂದು ಬೆಳಿಗ್ಗೆ ವಾರ್ತಾ ವಾಹಿನಿಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿದ್ದ ಸುದ್ದಿಯನ್ನು ನೋಡಿ ವಿರಾಟ್ ದಂಗಾಗಿದ್ದ. ವಿರಾಟ್ ಅಕ್ಷರಾ ನಿಶ್ಚಿತಾರ್ಥದ ವಿಡಿಯೋ ಫೋಟೋ ತುಣುಕುಗಳು ದೂರದರ್ಶನದ ಪರದೆಯ ಮೇಲೆ ಬರುತ್ತಿದ್ದವು.    “ಖ್ಯಾತ ಉದ್ಯಮಿ ವಿರಾಟ್ ಸೂರ್ಯವಂಶಿ ಹಾಗೂ ಕೇಂದ್ರ ಸಚಿವ ಜಗದೀಶ್ ಅವರ ಮಗಳು ಅಕ್ಷರಾ ಅವರ ಖಾಸಗಿ ನಿಶ್ಚಿತಾರ್ಥ”   “ಬಿಸಿನೆಸ್ ಕ್ಷೇತ್ರ ಹಾಗೂ ಯಾವುದೇ ರಾಜಕೀಯ ಪ್ರಭಾವಿ ನಾಯಕರು ಈ ಸಂದರ್ಭದಲ್ಲಿ ಹಾಜರಾಗಿಲ್ಲ ಎಂಬ ಸುದ್ದಿ ಕೇಳಿಬರುತ್ತಿದೆ”    “ಉದ್ಯಮಿ ವಿರಾಟ್ […]

6 min 12 views