**ಅಜೇಯ – 82**
ವಿಕ್ರಮ್ ಮುಖ ಕ್ರೋಧದಿಂದ, ಅವಮಾನದಿಂದ ಕೆಂಪಗೆ ತಿರುಗಿದೆ. ತನ್ನ ಅತ್ಯಂತ ಸಮರ್ಥರಾದ ಮೂವರು ಅನುಚರರು ತನ್ನ ಕಣ್ಣೆದುರಲೇ ಆ ಆಳವಾದ ಕಣಿವೆಯಲ್ಲಿ ಬಿದ್ದು ಮರಣಿಸುವುದನ್ನು ಅವನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ..
ಮತ್ತೊಂದು ಕಡೆ ಆಚೆಯ ದಂಡೆಯಲ್ಲಿ ರಾಘವ್ ಮತ್ತು ಸಿಯಾ ಸುರಕ್ಷಿತವಾಗಿ ನಿಂತಿದ್ದಾರೆ..
ವಿಕ್ರಮ್ ತನ್ನ ಕೈಯಲ್ಲಿರುವ ಗನ್‌ನಿಂದ ಆಚೆಯ ದಂಡೆಯಲ್ಲಿರುವ ರಾಘವ್ ಕಡೆಗೆ ಅಪಾರ ಆವೇಶದಿಂದ ಗುರಿಯಿಟ್ಟನು..
ವಿಕ್ರಮ್ ಪಕ್ಕದಲ್ಲಿರುವ ಉಳಿದ ಮೂವರೂ ಕೂಡ ತಮ್ಮ ಅಸಾಲ್ಟ್ ರೈಫಲ್‌ಗಳನ್ನು ಕಾಕ್ ಮಾಡಿ, ರಾಘವ್ ಮೇಲೆ ನೇರವಾಗಿ ಗುರಿಯಿಟ್ಟರು…
**”ರಾಘವ್… ವ್..!”** ಎಂದು ಅರಚುತ್ತಿದ್ದ ವಿಕ್ರಮ್—